ಸ್ವಾಭಿಮಾನಿ ರಾಷ್ಟ್ರನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಲು ಬಹುವಾಗಿ ಶ್ರಮಿಸಿದರು. ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದು ಕ್ರಮೇಣ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಶಿವಾಜಿಯ ಶೌರ್ಯ, ಸಾಹಸ ರಾಷ್ಟ್ರಭಕ್ತ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಿ.
ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧರೆನ್ನಿಸಿಕೊಂಡು ಹದಿಹರೆಯದಲ್ಲಿಯೇ ಯುದ್ಧಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣದ ಕನಸು ಕಂಡವರು.
ಛತ್ರಪತಿ ಶಿವಾಜಿ ಅವರು ಕ್ರಿ ಶ 1627 ರಂದು ಪುಣೆ ಜಿಲ್ಲೆಯ ಶಿವನೇರು ದುರ್ಗಾದಲ್ಲಿ ತಾಯಿ ಜೀಜಾಬಾಯಿ ಉದರದಲ್ಲಿ ಜನಿಸಿದರು ಇವರ ತಂದೆ ಶಹಾಜೀ ಬೋಸ್ಲೆ ಇವರ ಗುರುಗಳ ಹೆಸರು ದಾದಾಜೀ ಕೊಂಡದೇವ.
ಶಿವಾಜಿಗೆ 14 ವಯಸ್ಸು ಅಷ್ಟೇ ಪುಣೆ ಊರು ಸುತ್ತಮುತ್ತಲು ಹತ್ತಾರು ಹಳ್ಳಿಗಳೇ ಅವನ ಪುಟ್ಟ ರಾಜ್ಯ ಅವನ ತಂದೆ ಶಹಾಜಿ ರಾಜ ಬಿಜಾಪುರದ ಸುಲ್ತಾನನ ಕೈಕೆಳಗೆ ಒಬ್ಬ ಸರದಾರ ಅವನಿಗೆ ತನ್ನ ಮಗನ ಸ್ವಭಾವ ಚೆನ್ನಾಗಿ ಗೊತ್ತು ಶಿವಾಜಿ ಸಿಂಹದಂತೆ ನಿರ್ಭಯನಾದ ಬಾಲಕ ಪರದೇಶೀರ ಗಿಂತಲೂ ಅವನು ಸತಾರಾಂ ತಲೆಬಾಗುವನಲ್ ಎಂಬುದನ್ನು ಕಂಡು ಅವನಿಗೆ ತುಂಬಾ ಸಂತೋಷ ತಂದೆಗೆ ಮಗನ ಈ ಗುಣ ಗೊತ್ತಾದ ರೀತಿ ಬಹು ಸ್ವಾರಸ್ಯವಾಗಿದೆ.
ಒಂದು ಸಲ ತಂದೆ ಶಹಾಜಿ ರಾಜ ಶಿವಾಜಿಯನ್ನು ಬಿಜಾಪುರದ ದರ್ಬಾರಿಗೆ ಕರೆದುಕೊಂಡು ಹೋದ ಆಗಿನ್ನೂ ಶಿವಾಜಿಗೆ 12 ವರ್ಷವೂ ತುಂಬಿರಲಿಲ್ಲ ಬಿಜಾಪುರದ ಮುಸಲ್ಮಾನ ಸುಲ್ತಾನನಿಗೆ ಶಹಾಜಿ ಮೂರು ಸಲ ನೆಲಮುಟ್ಟಿ ನಮಸ್ಕಾರ ಮಾಡಿದ ಆಮೇಲೆ ಮಗನಿಗೆ ಅದೇ ರೀತಿ ಮಾಡಲು ಹೇಳಿದ ಆದರೆ ಶಿವಾಜಿ ಮಾತ್ರ ಎರಡು ಹೆಜ್ಜೆ ಹಿಂದೆಸರಿದ ತಲೆಬಾಗದೆ ಶಿವಾಜಿ ಮಾತ್ರ ನೆಟ್ಟಗೆ ನಿಂತ ನಮ್ಮ ದೇಶವನ್ನು ನಮ್ಮ ಧರ್ಮವನ್ನು ತುಳುದಿರುವ ಪರಕೀಯ ರಾಜನಿಗೆ ನಾನು ತೆಲೆಬಾಗುವುದಿಲ್ಲ ಎನ್ನುವ ನಿರ್ಧಾರ ಅವನ ಕಣ್ಣಲ್ಲಿ ಮಿಂಚಿತು ಶಿವಾಜಿ ನಮಸ್ಕಾರ ಮಾಡದೆ ಹಾಗೆಯೇ ಸಿಂಹನಡಿಗೆಯಿಂದ ದರ್ಬಾರಿನಿಂದ ವಾಪಸಾದ ಬಿಜಾಪುರದ ಆಸ್ಥಾನದಲ್ಲಿ ಅದುವರೆಗೂ ಅಷ್ಟು ನಿರ್ಭಯವಾಗಿ ಯಾರು ನಡೆದುಕೊಂಡಿಲ್ಲ ಆ ಬಾಲಕನ ಎದೆಗಾರಿಕೆ ಕಂಡು ಎಲ್ಲರೂ ನಿಬ್ಬೆರಗಾದರು ಶಿವಾಜಿ ದರ್ಬಾರಿನಿಂದ ಮನೆಗೆ ಬರುತ್ತಿರುವಾಗ ದಾರಿಯಲ್ಲಿ ಇನ್ನೊಂದು ಘಟನೆ ನಡೆಯಿತು ಒಬ್ಬ ಕಟುಕ ಹಸುವನ್ನು ಕೊಲ್ಲಲು ಕತ್ತಿ ಎತ್ತಿದ ಆ ದೃಶ್ಯ ಶಿವಾಜಿಯ ಕಣ್ಣಿಗೆ ಬಿದ್ದಿದ್ದೇ ತಡ ಅವನು ತನ್ನ ಕಿರು ಗುತ್ತಿಗೆಯನ್ನು ಎಳೆದು ಆ ಕಟುಕನ ಕೈಯನ್ನು ಕತ್ತರಿಸಿ ಚೆಲ್ಲಿದ.
ತನ್ನ ಎಳೆಮಗನ ಈ ಎಲ್ಲಾ ವರ್ತನೆ ಕಂಡು ತಂದೆ ಶಹಾಜೀ ಗೆ ಸಂತೋಷವಾಯಿತು ಸ್ವದೇಶ ಸ್ವಧರ್ಮದ ಮೇಲೆ ಮಗನಿಗಿದ್ದ ಪ್ರೀತಿ ಕಂಡು ಅವನ ಹೃದಯ ಹಿಗ್ಗಿತು ತನಗಂತೂ ಸ್ವತಂತ್ರ ರಾಜನಾಗಲೂ ಸಾಧ್ಯವಾಗಲಿಲ್ಲ ಕೊನೆಯ ಪಕ್ಷ ತನ್ನ ಮಗನಾದರೂ ಸ್ವತಂತ್ರನಾದ ಶೂರ ರಾಜನಾಗಿ ಬಾಳಿ ಬೆಳಗಲಿ ಎಂದು ಹರಿಸಿ ಅವನನ್ನು ಪುಣೆಗೆ ಕಳಿಸಿಕೊಟ್ಟ.
ಇಷ್ಟೆಲ್ಲಾ ಧೈರ್ಯ ಶೌರ್ಯ ದೇಶಭಕ್ತಿ ಧರ್ಮ ಪ್ರೇಮದ ಗುಣಗಳು ಶಿವಾಜಿಗೆ ಹೇಗೆ ಬಂದವು ಎನ್ನುವಿರಾ ಎಳೆಮಗುವಾದಾಗಿನಿಂದಲೂ ಅವನ ತಾಯಿ ಜೀಜಾಬಾಯಿ ಅವನಿಗೆ ರಾಮಾಯಣ ಮಹಾಭಾರತ ಬರುವ ವೀರರ ಕಥೆಗಳನ್ನು ಹೇಳುತ್ತಿದ್ದಳು ಶಿವಾಜಿಯು ಮನಸ್ಸು ಹಾತೊರೆಯಿತು ಜೊತೆಗೆ ದಾದಾಜಿ ಕೊಂಡದೇವ ನಂತಹ ಆದರ್ಶ ಗುರು ಅವನಿಗೆ ಸಿಕ್ಕಿದ ಶಿವಾಜಿ ತನ್ನ ಹತ್ತನೇ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದಿದ್ದ ಆಗ ಅವನ ತಂದೆ ಶಹಾಜಿ ರಾಜನ ಆಸ್ಥಾನದಲ್ಲಿ ಜರುಗುತ್ತಿದ್ದು ಪವಿತ್ರವಾದ ಹಿಂದೂ ರೀತಿನೀತಿಗಳನ್ನು ಕಂಡು ಶಿವಾಜಿ ಸ್ಪೂರ್ತಿ ಪಡೆದಿದ್ದ ಕರ್ನಾಟಕದಲ್ಲಿ ಹಿಂದೆ ವೈಭವದಿಂದ ಮೆರೆದಿದ್ದ ವಿಜಯನಗರ ಸಾಮ್ರಾಜ್ಯದ ನೆನಪು ಅವನಿಗೆ ಹುಮ್ಮಸ್ಸು ತುಂಬಿತು.
ಶಿವಾಜಿಯ ಸ್ವರಾಜ್ಯವನ್ನು ಕಟ್ಟುವ ಕೆಲಸ ಮಾಡಿದ್ದು ಕೋಟೆಗಳ ಸಹಾಯದಿಂದಲೇ ತನ್ನ 19ನೇ ವಯಸ್ಸಿಗೆ ಅವನು ಮೊದಲನೇ ಕೋಟೆ ಗೆದ್ದ ಕೋಟೆ ಹೆಸರು ತೋರಣಗಡ ಸ್ವರಾಜ್ಯಕ್ಕೆ ಕಟ್ಟಿದ ತೋರಣ ಅದು ಕಾವಿ ಬಣ್ಣದ ಪವಿತ್ರ ಭಗವಾಧ್ವಜ ಅದರ ಮೇಲೆ ಹಾರಾಡತೊಡಗಿತ್ತು ಸ್ವರಾಜ್ಯದ ಆ ಮೊದಲನೆಯ ಕೋಟೆಯನ್ನು ಭದ್ರ ಪಡಿಸಬೇಕೆಂದು ಕೂಡಲೇ ಶಿವಾಜಿ ತನ್ನ ಸೈನಿಕರಿಗೆ ಆಜ್ಞೆ ಮಾಡಿದ ಅವನಿಗೆ ಅಲ್ಲಿ ಇನ್ನೊಂದು ಅದೃಷ್ಟ ಕಾದಿತ್ತು ನೆಲ ಅಗೆಯುತ್ತಿದ್ದಾಗ ಹಣದ ಕೊಪ್ಪರಿಗೆಗಳು ಸಿಕ್ಕವು ಸ್ವರಾಜ್ಯ ದೇವತೆಗೆ ಲಕ್ಷ್ಮಿಯ ಮೊದಲ ಕಾಣಿಕೆ ಅದು ಆದರೆ ಅಷ್ಟೊಂದು ಹಣವನ್ನು ನೋಡಿ ಆ ಬಡ ಮಾವಳಿಗರಲ್ಲಿ ಒಬ್ಬರಿಗಾದರೂ ಬಾಯಲ್ಲಿ ನೀರು ಬರಲಿಲ್ಲ ಆದಷ್ಟು ಹಣವನ್ನು ಅವರು ಶಿವಾಜಿಗೆ ತಲುಪಿಸಿದರು ಶಿವಾಜಿ ಹೇಳಿದನು ಅದು ರಾಜ್ಯಕ್ಕೆ ಸೇರಿದ್ದು ದೇವರ ಹಣ ತಾವು ಮುಟ್ಟಬಾರದು.
ತಾಯಿ ಜೀಜಾಬಾಯಿ ಹಾಗೂ ಗುರು ಕೊಂಡದೇವರೊಂದಿಗೆ ಬೆಂಗಳೂರಿಗೆ ಬಂದ ಶಿವಾಜಿ ವಿವಾಹ ನೆರವೇರಿದ್ದು 1640-42ರ ಸುಮಾರಿಗೆ. ಆಗ ಬೆಂಗಳೂರು ಕೋಟೆಯೊಳಗೆ ಇದ್ದ ಗೌರಿಮಹಲ್ನಲ್ಲಿ ಶಿವಾಜಿ ಮೊದಲ ವಿವಾಹ ನಿಂಬಾಳ್ಕರ್ ಮನೆತನದ ಸಾಯಿಬಾಯಿ ಜೊತೆಗೆ ವಿಜೃಂಭಣೆಯಿಂದ ಜರುಗಿತು. ಪರದೇಶಿಗಳ ಆಳ್ವಿಕೆಯಿಂದ ನಲುಗಿಹೋಗಿದ್ದ ಹಿಂದೂಸ್ಥಾನವನ್ನು ಒಗ್ಗೂಡಿಸುವ ಮಹತ್ವದ ನಿರ್ಧಾರಕ್ಕೆ ಬಂದ ಶಿವಾಜಿ ಮೊದಲಿಗೆ ಕೊಂಕಣ ಭಾಗದಲ್ಲಿದ್ದ ಅನೇಕ ಕೋಟೆಗಳನ್ನು ಗೆದ್ದರು. ಯುದ್ಧಕೌಶಲದಿಂದ ಹಲವಾರು ಯುದ್ಧಗಳಲ್ಲಿ ವಿಜಯ ಸಾಧಿಸಿ 1674ರಲ್ಲಿ ಮರಾಠ ರಾಜ್ಯಕ್ಕೆ ನಾಂದಿಹಾಡಿದರು.
1674ರಲ್ಲಿ ರಾಯಘಡದಲ್ಲಿ ಕಿರೀಟಧಾರಣೆಯ ಬಳಿಕ ಛತ್ರಪತಿ ಶಿವಾಜಿ ಮಹಾರಾಜ್ ಇಡೀ ಪಶ್ಚಿಮಭಾರತವನ್ನು ತಮ್ಮ ಆಳ್ವಿಕೆಗೆ ತಂದರು. ಸ್ವಾಭಿಮಾನಿ ರಾಷ್ಟ್ರನಿರ್ವಣಕ್ಕೆ ಹೋರಾಡಿದ ಶಿವಾಜಿ 1680ರಲ್ಲಿ ಕಾಲವಾದರೂ ಅವರು ಸ್ಥಾಪಿಸಿದ ಮರಾಠರಾಜ್ಯ 1818ರವರೆಗೆ ಉಜ್ವಲವಾಗಿ ಬೆಳಗಿತು.
ಒಂದು ಸಲ ಶಿವಾಜಿ ಮಹಾರಾಜರು ಒಂದು ಕೋಟೆಯಿಂದ ಮತ್ತೊಂದು ಕೋಟೆಗೆ ಹೊಗುವಾಗ ದಾರಿ ತಪ್ಪಿದರು. ಆಗ ಅವರು ಒಂದು ಬೆಟ್ಟ ಏರಿ ಯಾವುದಾದರು ಹಳ್ಳಿ ಇದೆಯಾ ಎಂದು ನೋಡಿದರು, ಆದರೆ ಯಾವ ಹಳ್ಳಿಯೂ ಕಾಣಿಸಲಿಲ್ಲ. ರಾತ್ರಿಯಾಗುತ್ತಿತ್ತು. ಅವರು ಬೆಟ್ಟ ಇಳಿದು ಬರುವಾಗ ದೂರದಲ್ಲಿ ದೀಪವೊಂದು ಮಿಣುಕುವುದು ಕಾಣಿಸುತ್ತಿತ್ತು. ಅದೇ ದಾರಿಯಲ್ಲಿ ಹೋದಾಗ ಅವರು ಒಂದು ಗುಡಿಸಲಿನ ಬಳಿ ಬಂದರು.
ಗುಡಿಸಲಿನಲ್ಲಿ ಒಬ್ಬ ವೃದ್ಧ ಮಹಿಳೆ ಇದ್ದಳು. ಅವಳು ಮಹಾರಾಜರನ್ನು ಒಬ್ಬ ಸೈನಿಕನಿರಬೇಕೆಂದು ತಿಳಿದು ಸ್ವಾಗತಿಸಿದಳು. ಅವನು ಹಸಿದಿರುವನೆಂದು ಅರಿತ ಮಹಿಳೆಯು ಕೈ ಕಾಲು ಮುಖ ತೊಳೆಯಲು ನೀರು ನೀಡಿದಳು ಮತ್ತು ವಿಶ್ರಮಿಸಲು ಚಾಪೆಯನ್ನು ಹಾಸಿದಳು. ಅವನು ವಿಶ್ರಮಿಸಿದ ನಂತರ ಮಹಿಳೆಯು ಬಿಸಿ ಬಿಸಿ ಅನ್ನ ಮತ್ತು ಸಾಂಬಾರನ್ನು ತಿನ್ನಲು ನೀಡಿದಳು.
ತುಂಬಾ ಹೊಟ್ಟೆ ಹಸಿದಿದ್ದ ಶಿವಾಜಿಯು ತಕ್ಷಣ ತಿನ್ನಲು ಬಿಸಿ ಅನ್ನಕ್ಕೆ ಕೈ ಹಾಕಿದನು. ಬಿಸಿ ತಡೆಯಲಾರದೆ ಚೀರಿದನು ಮತ್ತು ಸ್ವಲ್ಪ ಅನ್ನವನ್ನು ಚಲ್ಲಿದನು. ಇದನ್ನು ನೋಡಿದ ಮಹಿಳೆಯು ಹೇಳಿದಳು, ಅರೇ ನೀನು ಸಹ ನಿನ್ನ ಸ್ವಾಮಿ ಶಿವಾಜಿಯಂತೆ ಗಡಿಬಿಡಿ ಮಾಡುತ್ತೀಯ. ಅದಕ್ಕೆ ಕೈ ಸುಟ್ಟುಕೊಂಡೆ ಮತ್ತು ಸ್ವಲ್ಪ ಅನ್ನವನ್ನು ಬೀಳಿಸಿದೆ.
ಶಿವಾಜಿಯು ಆಶ್ಚರ್ಯದಿಂದ, ನನ್ನ ಸ್ವಾಮಿ ಶಿವಾಜಿಯಲ್ಲಿ ತಾಳ್ಮೆ ಇಲ್ಲ ಎಂದು ನೀನು ಯಾಕೆ ಹೇಳುತ್ತೀಯ ಎಂದು ಕೇಳಿದನು.
ಆಗ ಮಹಿಳೆಯು ಹೇಳಿದಳು, ನೋಡು ಮಗನೆ, ಶಿವಾಜಿಯು ತನ್ನ ಗಡಿಬಿಡಿ ಇಂದಾಗಿ ಶತ್ರುಗಳ ಸಣ್ಣ ಕೋಟೆಯನ್ನು ಗೆಲ್ಲುವ ಬದಲಾಗಿ ದೊಡ್ಡ ದೊಡ್ಡ ಕೋಟೆಗಳನ್ನು ಗೆಲ್ಲಲು ಹೊಗುತ್ತಿದ್ದಾನೆ ಮತ್ತು ಇದರಿಂದಾಗಿ ಅವನು ತನ್ನ ವೀರ ಸೈನಿಕರನ್ನು ಕಳೆದುಕೊಳ್ಳುತ್ತಿದ್ದಾನೆ. ಅದರ ಬದಲಿಗೆ ತಾಳ್ಮೆಯಿಂದ ಮೊದಲು ಸಣ್ಣ ಸಣ್ಣ ಕೋಟೆಗಳನ್ನು ಗೆದ್ದರೆ ಅವನ ಬಲವೂ ಹೆಚ್ಚುತ್ತದೆ ಮತ್ತು ಸೈನಿಕರೂ ಉಳಿಯುತ್ತಾರೆ. ಅದೇ ರೀತಿ ನೀನು ಮೊದಲು ಬದಿಯಲ್ಲಿರುವ ತಣ್ಣಗಿರುವ ಅನ್ನವನ್ನು ಮೊದಲು ತಿನ್ನು.
ಶಿವಾಜಿಯು ಕೂಡಲೇ ವೃದ್ಧ ಮಾತಿನ ಹಿಂದಿರುವ ಅರ್ಥವನ್ನು ಅರಿತನು ಮತ್ತು ಯಾವುದೇ ತೀರ್ಮಾನವನ್ನು ಗಡಿಬಿಡಿಯಲ್ಲಿ ಮಾಡಬಾರದೆಂದು ಅರಿತನು ಕೊನೆಗೆ ಶಿವಾಜಿ ಮಹಾರಾಜರು 1680 ಏಪ್ರಿಲ್ 14 ಮರಣ ಹೊಂದಿದರು.
- ಮನೋಜ್ ಕಪ್ಪತ್ತನವರ

No comments:
Post a Comment