Tuesday, February 4, 2020

 ಅರವಿಂದ ಘೋಷ್ ರ ಬಗ್ಗೆ ಲೇಖನ

ಬಂಗಾಳದ ಸುಸಂಸ್ಕೃತ ಕುಟುಂಬಗಳಲ್ಲಿ ಒಂದಾದ ಕ್ರಷ್ಣಧನ ಘೋಷ್ ಮತ್ತು ಸ್ವರ್ಣಲತಾದೇವಿ ದಂಪತಿಗಳ ಉದರದಲ್ಲಿ 15 ಅಗಸ್ಟ್ 1872ರಲ್ಲಿ ಜನಿಸಿದ ಮಗುವೇ ಅರವಿಂದ ಇವನ ಏಳು ವರ್ಷದ ಬಾಲಕನಿದ್ದಾಗಲೇ ವಿದ್ಯಾಭ್ಯಾಸದ ಸಲುವಾಗಿ ಇಂಗ್ಲೆಂಡಗೆ ತೆರಳಿದರು ಅರವಿಂದ ಘೋಷ್ ರವರು ಹದಿನಾಲ್ಕು ವರ್ಷಗಳ ಕಾಲ ಲಂಡನಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅದ್ಯಯನ ಮಾಡಿ ಅಲ್ಲಿನ ಇಂಗ್ಲಿಷ್ ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಅದ್ವಿತೀಯವಾದಂತ ಪಾಂಡಿತ್ಯವನ್ನು ಪಡೆದರು ತಂದೆಯ ಬಯಕೆಯಂತೆ ಇವರು ಐ ಎ ಎಸ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಸಹ ಅವರು ಅದಕ್ಕೆ ಸಂಬಂಧಿಸಿದ ಕುದುರೆ ಸವಾರಿ ಪರೀಕ್ಷೆಗೆ ಹೋಗದೆ ಆ ಪದವಿಗೆ ಅನರ್ಹರಾದರು

ಅರವಿಂದ ಘೋಷ್ ರವರು 1893 ರಲ್ಲಿ ಭಾರತಕ್ಕೆ ಮರಳಿ ಬಂದರು ನಂತರ ಗಾಯಕವಾಡದ ಮಹಾರಾಜರ ಅಹ್ವಾನ ಸ್ವೀಕರಿಸಿ ಬರೋಡಾ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು ಮತ್ತು ಕೆಲವು ಕಾಲ ಮಹಾರಾಜರ ಆಪ್ತ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದರು. ತಮ್ಮ ಮಾತೃಭಾಷೆಯಾದ ಬಂಗಾಳಿಯತ್ತ ಒಲವು ತೋರಿದ ಅರವಿಂದರು ಬಂಕಿಮ ಚಂದ್ರ, ಸ್ವಾಮಿ ವಿವೇಕಾನಂದ,ರವೀಂದ್ರನಾಥ ಟಾಗೋರ್ ಅವರ ಕೃತಿಗಳನ್ನು ಅದ್ಯಯನ ಮಾಡಿದರು ಶ್ರೀ ರಾಮಕೃಷ್ಣ ಪರಮಹಂಸರ "ವಚನಾಮೃತ" ಎಂಬ ಗ್ರಂಥವು ಅರವಿಂದರನ್ನು ಆಕರ್ಷಿಸಿತು ಇವರು ಸಂಸ್ಕೃತವನ್ನು ಕಲಿತು ಅದರಲ್ಲಿಯೂ ಸಹ ಪಾಂಡಿತ್ಯ ಪಡೆದರು ಅರವಿಂದ ಘೋಷ್ ರವರು ಭರ್ತೃಹರಿಯ ನೀತಿಶತಕ ಕಾಳಿದಾಸನ ವಿಕ್ರಮೋರ್ವಶೀಯ ಹಾಗೂ ಇನ್ನೂ ಮೊದಲಾದ ಸಂಸ್ಕೃತ ಕೃತಿಗಳನ್ನು ಇಂಗ್ಲಿಷ್ ಭಾಷಾಂತರಿಸಿದರು ನಂತರ ವಾಲ್ಮೀಕಿ ರಾಮಾಯಣ ವ್ಯಾಸ ಭಾರತದ ಕೆಲವು ಭಾಗಗಳನ್ನು ಇಂಗ್ಲೀಷಗೆ ಅನುವಾದಿಸಿ ಹೆಚ್ಚಿನ ಗೌರವ ಪಡೆದರು.
 1901 ರಲ್ಲಿ ಮೃಣಾಲಿನಿ ಎಂಬ ಕನ್ಯೆಯನ್ನು ವಿವಾಹವಾದರು ಅರವಿಂದ ಘೋಷ್ ಸ್ವಭಾವತ ಬಹಳ ಅಂತರ್ಮುಖಿ ಆಗಿದ್ದರು ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳಲು ನಿಶ್ಚಯಿಸಿದ ಅವರು ಕಮ್ಮಿ ಸಂಬಳದ ಮೇಲೆ ರಾಷ್ಟ್ರೀಯ ಕಾಲೇಜಿನ ಪ್ರಾಂಶುಪಾಲರಾದರು.
1901 ರಲ್ಲಿ ನಡೆದ ಕಾಂಗ್ರೆಸ್ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದ ಅರವಿಂದ ಘೋಷ್ ರವರು ಸಂಪೂರ್ಣ ಸ್ವಾತಂತ್ರ್ಯವೇ ಕಾಂಗ್ರೆಸನ ಧ್ಯೇಯ ಎಂಬ ನಿರ್ಣಯವನ್ನು ಸಮ್ಮೇಳನ ಸ್ವೀಕರಿಸುವಲ್ಲಿ ಯಶಸ್ವಿಯಾದರು ಸ್ವಾತಂತ್ರ್ಯ ಚಳುವಳಿ ಸಮಯದಲ್ಲಿ ದೇಶ ಸಂಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಅರವಿಂದ ಘೋಷ್ ಬರೋಡದಲ್ಲಿ ಬಾಸ್ಕರ ಲೀಲೆ ಎಂಬ ಯೋಗಿಗಳನ್ನು ಭೇಟಿ ಮಾಡಿದರು ಈ ಭೇಟಿಯ ಸಂದರ್ಭದಲ್ಲಿ ಅರವಿಂದರು ಆ ಯೋಗಿಗಳ ತತ್ವವನ್ನು ಅರಿತಿದ್ದರಿಂದಲೆ ಅವರು ಆಧ್ಯಾತ್ಮಿಕದತ್ತ ತಮ್ಮ ಮನಸ್ಸನ್ನು ಹರಿಸಿದರು ಈ ಜಗತ್ತು ಈಶ್ವರನ ಭೂಮಿಕೆ ಎಂಬ ಅರಿವು ಅರವಿಂದರಿಗೆ ಕ್ರಮೇಣ ಸ್ಪಷ್ಟವಾಯಿತು.

ಅರವಿಂದ ಘೋಷರವರು ಕಲ್ಕತ್ತಾಗೆ ಮರಳಿದ ನಂತರ ಬಿಪಿನ್ ಚಂದ್ರ ಪಾಲರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ "ವಂದೇ ಮಾತರಂ" ಗೆ ಸಂಬಂಧಿಸಿದ ಲೇಖನಗಳನ್ನು ಇಂಗ್ಲಿಷ್ ಪತ್ರಿಕೆಗೆ ಬರೆದು ಯುವಕರಲ್ಲಿ ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆ ನೀಡಿದ್ದರಿಂದ ಬ್ರಿಟಿಷರ ಕೋಪಕ್ಕೆ ಬಲಿಯಾದರು ಆ ಪತ್ರಿಕೆ ಸಂಪಾದಕರನ್ನು ಮತ್ತು ಅರವಿಂದರನ್ನು ರಾಜದ್ರೋಹದ ಅಪಾದನೆ ಹೊರಸಿ ಬಂಧಿಸಿದರು ಬ್ರಿಟಿಷ್ ಸರ್ಕಾರವು ಅವರಿಗೆ ಕಾರಗೃಹ ಶಿಕ್ಷೆಯನ್ನು ವಿಧಿಸಲಾಯಿತು ಅರವಿಂದರು ಸರೆವಾಸ ಅನುಭವಿಸಿದ ಒಂದು ವರ್ಷದಲ್ಲಿ ವೇದ ಉಪನಿಷತ್ತು ಗೀತೆಗಳನ್ನು ಅದ್ಯಯನ ಮಾಡಿ "ಸರ್ವಂ ಖಲ್ವಿದಂ ಬ್ರಹ್ಮ" ಎಂಬ ಆಧ್ಯಾತ್ಮದ ಅನುಭವ ಪಡೆದರು.

ಅರವಿಂದ ಘೋಷ್ ರವರು ಕಾರಗೃಹದಿಂದ ಮರಳಿ ಬಂದ ನಂತರ ಇಂಗ್ಲಿಷ್‌ನಲ್ಲಿ ಕರ್ಮಯೋಗಿ ಬಂಗಾಳಿಯಲ್ಲಿ "ಧರ್ಮ" ಎಂಬ ಸಾಪ್ತಾಹಿಕ ಪತ್ರಿಕೆ ಆರಂಬಿಸಿದರು ದಿನಾಂಕ 04-04-1910 ರಂದು ಪಾಂಡಿಚೇರಿ ಪ್ರವೇಶಿಸಿದ ಅವರು ಬೌತಿಕ ಶರೀರ ತ್ಯಜಿಸುವರೆಗೂ ಅಂದರೆ 1950 ರ ವರೆವಿಗೂ ಬೇರೆ ಯಾವ ಸ್ಥಳಕ್ಕೆ ಹೋಗಲಿಲ್ಲ ದಿನಾಂಕ 24-4-1920  ರಲ್ಲಿ ಮೇರಿ ರಿಚರ್ಡ್ ಎಂಬ ಪ್ರಾನ್ಸ್ ಮಹಿಳೆ ಅರವಿಂದರ ಶಿಷ್ಯರಾಗಿ ಬಂದು ಪಾಂಡಿಚೇರಿಯ ಅರವಿಂದಾಶ್ರಮವನ್ನು ಉತ್ತಮ ರೀತಿಯಾಗಿ ರೂಪಿಸುವಲ್ಲಿ ಕಾರ್ಯಶೀಲರಾದರೂ ದಿನಾಂಕ 24-11-1926 ರಲ್ಲಿ ಅರವಿಂದರಿಗೆ ಅತಿಮಾನವ ಸತ್ವ ಆವತರಣವಾಯಿತು ಸುಮಾರು ಏಳು ವರ್ಷಗಳ ಕಾಲ "ಆರ್ಯ" ಎಂಬ ಪತ್ರಿಕೆಯಲ್ಲಿ ಅರವಿಂದರ ವೇದ ರಹಸ್ಯ ಉಪನಿಷತ್ ವ್ಯಾಖ್ಯಾನ ದಿವ್ಯ ಜೀವನದ ಆದರ್ಶ ಯೋಗ ಸಮನ್ವಯ ಭಾರತೀಯ ಸಂಸ್ಕೃತಿಯ ಹಿರಿಮೆ ಮನುಕುಲದ ಅಭ್ಯುದಯ ಸಾಹಿತ್ಯ ದರ್ಶನ ಇನ್ನೂ ಮುಂತಾದ ವಿಷಯಗಳನ್ನು ಕುರಿತು ಅವರು ಅನೇಕ ಲೇಖನಗಳನ್ನು ಬರೆದು ಪ್ರಕಟಿಸಿದರು ಸಾವಿತ್ರಿ ಅರವಿಂದರ ಮಹತ್ವದ ಕೃತಿಯಾದ ಮಹಾಕಾವ್ಯ ದಿವ್ಯ ಜ್ಯೋತಿ ಯೋಗ ಸಮನ್ವಯ ಗೀತಾ ಪ್ರಬಂಧಗಳು ಭಾರತೀಯ ಸಂಸ್ಕೃತಿಯ ಬುನಾದಿ ಕಾಳಿದಾಸ ವ್ಯಾಸ ಮತ್ತು ವಾಲ್ಮೀಕಿ ಮಾನವ ಚಕ್ರ ಇವೆಲ್ಲವೂ ಅರವಿಂದರು ರಚಿಸಿರುವ ಕೃತಿಗಳಲ್ಲಿ ಬಹಳ ಮಹತ್ವವಾದವುಗಳು
ಕನ್ನಡ ಸಾಹಿತ್ಯದ ಮೇಲೆ ಅರವಿಂದರ ಪ್ರಭಾವ ಬೀರಿದೆ ಎಂದರೆ ತಪ್ಪಾಗಲಾರದು ಏಕೆಂದರೆ ಕುವೆಂಪು, ದ.ರಾ ಬೇಂದ್ರೆ ಮತ್ತು ಗೋಕಾಕ್ ರವರುಗಳು ಅರವಿಂದರ ಪ್ರಭಾವಕ್ಕೆ ಒಳಗಾದ ಕನ್ನಡದ ಪ್ರಮುಖ ಕವಿಗಳು

        - ಮನೋಜ್ ಕಪ್ಪತ್ತನವರ

No comments:

Post a Comment